Media
avant bkg hospital Introduces Revolutionary Robotic Natural Knee Replacement (NKR) Surgery in Mysore
Mysore, November 25, 2023 — Avant BKG Hospital is proud to announce the introduction of the groundbreaking Robotic Natural Knee Replacement (NKR) with Oxidised Zirconium Implant, a cutting-edge technology designed to redefine knee replacement procedures and offer patients a unique, customized solution for their knee ailments with long lasting implants, currently practiced by only 1% of the surgeons worldwide. Dr. H.C. Mahadevappa, Mysuru District In-charge Minister launched the technology along with Dr. P.C. Kumaraswamy, DHO Mysuru, Dr. K. Mohan, DHO, Mandya today at a private hotel in presence of Dr. T.N. Balakrishna Gowda (BKG), Managing Director of Avant BKG Hospitals, Mysore and other doctors and staff of the hospital.
“Avant BKG Hospital is committed to pushing the boundaries of cutting-edge medical innovation, and the introduction of the Robotic Natural Knee Replacement Surgery is a testament to our dedication to providing the best possible care for our patients,” said Dr. T.N. Balakrishna Gowda (BKG), Managing Director of Avant BKG Hospitals, Mysore.
Unlike traditional knee replacement surgeries that reconstruct knees in a standard ‘Pillar’ shape, the Robotic Natural Knee Replacement (NKR) allows surgeons to precisely recreate the patient’s original young knee. Only 0.1% of people naturally possess a perpendicular-shaped knee, making this technology a game-changer in the field of knee replacement
The human hand faces limitations in achieving precision up to 0.5mm & 0.5 degrees, a challenge that the Robotic Natural Knee Replacement (NKR) technology overcomes. This innovative approach not only eliminates the margin of error but also provides a distinctive touch, resulting in a pain-free and everlasting outcome with minimal soft tissue releases.
One of the unique features of this technology is its applicability to a younger demographic. While knee replacement surgeries are commonly associated with individuals above 60, Avant BKG Hospital recognizes the need to address knee problems in younger patients who have exhausted conservative treatment options as partial knee replacement. The Robotic Natural Knee Replacement (NKR) technology proves to be advantageous for these individuals, offering a solution that preserves bone, ligament, and muscle.
Traditional knee replacement surgeries often involve cutting bone, but the Robotic Natural Knee Replacement (NKR) surgery enables surgeons to preserve these crucial elements, maintaining the strength and power of the muscles. The result is enhanced stability and alignment, with each replacement tailored to the individual’s unique anatomical structure, ensuring long-lasting treatment outcomes.
Benefits of Robotic Natural Knee Replacement (NKR) at Avant BKG Hospital:
- No extra bone loss; only damaged parts are resurfaced
- Small incision
- No soft tissue damages
- No ligament injury
- Long-lasting Oxidised Zirconium implant
- Minimal blood loss
- Reduced pain
- Same-day walking and stair climbing
- Early discharge from the hospital
- No CT/MRI Radiations
- Faster recovery
Avant BKG Hospital is committed to providing state-of-the-art healthcare solutions, and the introduction of the Robotic Natural Knee Replacement (NKR) Surgery aligns with our mission to offer patients the most advanced and personalized treatment options available.
For more information, please contact: 9880233054
Authorized Signatory
Dr. T.N.Balakrishna Gowda,
ಅವಾಂಟ್ ಬಿಕೆಜಿ ಆಸ್ಪತ್ರೆ ವತಿಯಿಂದ ಮೊಣಕಾಲು
ಬದಲಿ ಶಸ್ತ್ರಚಿಕಿತ್ಸೆಗೆ ಮೈಸೂರಿನಲ್ಲಿ ಬಂತು ನೂತನ ತಂತ್ರಜ್ಞಾನ
ಮೈಸೂರು ನವೆಂಬರ್ 25, 2023 : ಮೈಸೂರು: ನಗರದ ಅವಾಂಟ್ ಬಿಕೆಜಿ ಆಸ್ಪತ್ರೆಯು ಮೊಣಕಾಲು ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಿದೆ.ಆಕ್ಸಿಡೈಸ್ಡ್ ಜಿರ್ಕೋನಿಯಮ್ ಇಂಪ್ಲಾಂಟ್‌ನೊಂದಿಗೆ ರೋಬೋಟಿಕ್ ನೈಸರ್ಗಿಕ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ನೂತನ ತಂತ್ರಜ್ಞಾನವನ್ನು (NKR) ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆಯು ಹೊರ ತಂದಿದೆ. ಇದು ಮೊಣಕಾಲು ಬದಲಿ ಕಾರ್ಯವಿಧಾನಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ಮತ್ತು ರೋಗಿಗಳಿಗೆ ತಮ್ಮ ಮೊಣಕಾಲಿನ ಕಾಯಿಲೆಗಳಿಗೆ ವಿನೂತನ ರೀತಿಯಲ್ಲಿ ಪರಿಹಾರ ನೀಡಲು ವಿನ್ಯಾಸಗೊಳಿಸಿದ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಈ ರೀತಿಯ ಬದಲಿ ವಿಧಾನವನ್ನು ಪ್ರಸ್ತುತ ಪ್ರಪಂಚದಾದ್ಯಂತ ಕೇವಲ ಶೇ. 1% ಶಸ್ತ್ರಚಿಕಿತ್ಸಕರು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೊಂದಿಗೆ ಡಾ.ಪಿ.ಸಿ. ಕುಮಾರಸ್ವಾಮಿ, ಡಿಎಚ್‌ಒ ಮೈಸೂರು, ಡಾ.ಕೆ.ಮೋಹನ್, ಡಿಎಚ್‌ಒ, ಮಂಡ್ಯ, ಇಂದು ಈ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎನ್. ಬಾಲಕೃಷ್ಣ ಗೌಡ ಹಾಗೂ ಆಸ್ಪತ್ರೆಯ ಇತರ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.
ನಂತರ ಅವಾಂಟ್ ಬಿಕೆಜಿ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ಎನ್. ಬಾಲಕೃಷ್ಣ ಗೌಡ (ಬಿಕೆಜಿ) ಮಾತನಾಡಿ, “ಅವಾಂಟ್ ಬಿಕೆಜಿ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಆವಿಷ್ಕಾರವನ್ನು ಅಳವಡಿಸಿಕೊಳ್ಳಲು ಬದ್ಧವಾಗಿದ್ದು, ರೋಬೋಟಿಕ್ ನೈಸರ್ಗಿಕ ಮೊಣಕಾಲು ಬದಲಿ ಶಸ್ತ್ರಚಿಕಿತ್ಸಕ ಯಂತ್ರವನ್ನು ಪರಿಚಯಿಸಿದೆ. ಆ ಮೂಲಕ ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ಒದಗಿಸುವ ನಮ್ಮ ಸಮರ್ಪಣೆಗೆ ಇದು ಸಾಕ್ಷಿಯಾಗಿದೆ” ಎಂದು ತಿಳಿಸಿದರು.
“ಈ ಮೊದಲು ಮೊಣಕಾಲುಗಳನ್ನು ಪ್ರಮಾಣಿತ ಪಿಲ್ಲರ್‘ ಆಕಾರದಲ್ಲಿ ಪುನರ್ನಿರ್ಮಿಸುವ ಸಾಂಪ್ರದಾಯಿಕ ವಿಧಾನವನ್ನು ಶಸ್ತ್ರಚಿಕಿತ್ಸೆಯಲ್ಲಿ ಅನುಸರಿಸಲಾಗುತ್ತಿತ್ತು. ಆದರೆ, ಇದೀಗ ಅದಕ್ಕಿಂತ ಭಿನ್ನವಾಗಿ ರೋಬೋಟಿಕ್ ನೈಸರ್ಗಿಕ ಮೊಣಕಾಲು ಬದಲಿ (NKR) ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಮೊಣಕಾಲನ್ನು ನಿಖರವಾಗಿ ಮರುಸೃಷ್ಟಿಸಬಹುದು. ಕೇವಲ ಶೇ. 0.1% ಜನರು ಮಾತ್ರ ಸ್ವಾಭಾವಿಕವಾಗಿ ಲಂಬ-ಆಕಾರದ ಮೊಣಕಾಲು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನವು ಮೊಣಕಾಲು ಬದಲಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಹಾಗೂ ಬದಲಾವಣೆ ತರಲು ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
“ಮಾನವನ ಕೈಯಿಂದ 0.5 mm & 0.5 ಡಿಗ್ರಿಗಳವರೆಗೆ ನಿಖರತೆಯನ್ನು ಸಾಧಿಸುವಲ್ಲಿ ಮಾತ್ರ ಸಾಧ್ಯ ಇದ್ದು, ಹಲವು ಮಿತಿಗಳನ್ನು ಎದುರಿಸುತ್ತಿದೆ. ಆದರೆ, ರೋಬೋಟಿಕ್ ನ್ಯಾಚುರಲ್ ನೀ ರಿಪ್ಲೇಸ್‌ಮೆಂಟ್ (NKR) ತಂತ್ರಜ್ಞಾನವು ಈ ಸವಾಲನ್ನು ಮೀರಿಸುತ್ತದೆ. ಈ ನವೀನ ವಿಧಾನವು ಎಲ್ಲಿ ದೋಷವಿದೆಯೋ ಅದನ್ನು ನಿವಾರಿಸುವುದಲ್ಲದೆ ಒಂದು ವಿಶಿಷ್ಟವಾದ ಸ್ಪರ್ಶವನ್ನು ನೀಡುತ್ತದೆ, ಇದರ ಪರಿಣಾಮವಾಗಿ ನೋವು-ಮುಕ್ತ ಜೀವನ ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಾಣಬಹುದಾಗಿದೆ” ಎಂದು ಮಾಹಿತಿ ನೀಡಿದರು.
“ಈ ತಂತ್ರಜ್ಞಾನದ ವೈಶಿಷ್ಟ್ಯವೆಂದರೆ ಕಿರಿಯ ವಯಸ್ಸಿನ ರೋಗಿಗಳಿಗೂ ಇದರ ಪ್ರಯೋಜನ ಲಭಿಸುತ್ತದೆ. ಇದು ಮೂಳೆ, ಅಸ್ಥಿರಜ್ಜು ಮತ್ತು ಸ್ನಾಯುಗಳನ್ನು ಸಂರಕ್ಷಣೆಗೆ ಪರಿಹಾರವನ್ನು ಒದಗಿಸುತ್ತದೆ. ಸಾಮಾನ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊಣಕಾಲು ಬದಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈ ತಂತ್ರಜ್ಞಾನದಿಂದ ಸಂಪ್ರದಾಯವಾದಿ ಚಿಕಿತ್ಸೆಯ ಆಯ್ಕೆಗಳಿಂದ ಬೇಸತ್ತಿರುವ ಕಿರಿಯ ರೋಗಿಗಳಲ್ಲಿನ ಮೊಣಕಾಲಿನ ಸಮಸ್ಯೆಗಳಿಗೂ ಪರಿಹಾರ ನೀಡಬಹುದಾಗಿದೆ” ಎಂದು ತಿಳಿಸಿದರು.
ಸಾಂಪ್ರದಾಯಿಕ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಮೂಳೆಗಳನ್ನು ಕತ್ತರಿಸಲಾಗುತ್ತದೆ. ಆದರೆ ರೋಬೋಟಿಕ್ ನ್ಯಾಚುರಲ್ ಮೊಣಕಾಲು ಬದಲಿ (NKR) ಶಸ್ತ್ರಚಿಕಿತ್ಸೆಯಲ್ಲಿ ಈ ವಿಧಾನ ಇರುವುದಿಲ್ಲ. ಇದು ಮೊಣಕಾಲನ್ನು ಸಂರಕ್ಷಿಸುತ್ತದೆ. ಜೊತೆಗೆ ಸ್ನಾಯುಗಳ ಶಕ್ತಿಯನ್ನು ಕಾಪಾಡುತ್ತದೆ. ಇದು ಬದಲಿ ಜೋಡಣೆಯಾಗಿದೆ. ಪ್ರತಿ ಬದಲಿಯು ವ್ಯಕ್ತಿಯ ವಿಶಿಷ್ಟ ಅಂಗರಚನೆಗೆ ಅನುಗುಣವಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ದೀರ್ಘಕಾಲೀನ ಚಿಕಿತ್ಸೆಯ ಫಲಿತಾಂಶಗಳನ್ನು ಖಾತ್ರಿಪಡಿಸುತ್ತದೆ ಎಂದರು.
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ರೋಬೋಟಿಕ್ ನ್ಯಾಚುರಲ್ ನೀ ರಿಪ್ಲೇಸ್‌ಮೆಂಟ್ (ಎನ್‌ಕೆಆರ್) ಪ್ರಯೋಜನಗಳು:
- ಹೆಚ್ಚುವರಿ ಮೂಳೆ ನಷ್ಟವಿಲ್ಲ; ಹಾನಿಗೊಳಗಾದ ಭಾಗಗಳನ್ನು ಮಾತ್ರ ಪುನರುಜ್ಜೀವನಗೊಳಿಸಲಾಗುತ್ತದೆ
- ಸಣ್ಣ ಛೇದನ
- ಮೃದು ಅಂಗಾಂಶ ಹಾನಿ ಇಲ್ಲ
- ಅಸ್ಥಿರಜ್ಜು ಗಾಯವಿಲ್ಲ
- ದೀರ್ಘಾವಧಿಯ ಆಕ್ಸಿಡೀಕೃತ ಜಿರ್ಕೋನಿಯಮ್ ಇಂಪ್ಲಾಂಟ್
- ಕನಿಷ್ಠ ರಕ್ತದ ನಷ್ಟ
- ಕಡಿಮೆ ನೋವು
- ಅದೇ ದಿನ ವಾಕಿಂಗ್ ಮತ್ತು ಮೆಟ್ಟಿಲು ಹತ್ತುವುದು
- ಆಸ್ಪತ್ರೆಯಿಂದ ಬೇಗ ಡಿಸ್ಚಾರ್ಜ್
- CT/MRI ವಿಕಿರಣಗಳಿಲ್ಲ
- ಬಹುಬೇಗ ಚೇತರಿಕೆ
Avant BKG ಆಸ್ಪತ್ರೆಯು ಅತ್ಯಾಧುನಿಕ ಆರೋಗ್ಯ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ ಮತ್ತು ರೋಬೋಟಿಕ್ ನ್ಯಾಚುರಲ್ ನೀ ರಿಪ್ಲೇಸ್‌ಮೆಂಟ್ (NKR) ಶಸ್ತ್ರಚಿಕಿತ್ಸೆಯಿಂದ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ನೀಡುತ್ತದೆ. ಉತ್ತಮ ಸೇವೆ ನೀಡುವುದೇ ನಮ್ಮ ಆಸ್ಪತ್ರೆಯ ಧ್ಯೇಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880233054
ಅಧಿಕೃತ ಸಹಿ
ಡಾ. ಟಿ.ಎನ್.ಬಾಲಕೃಷ್ಣ ಗೌಡ,
ವ್ಯವಸ್ಥಾಪಕ ನಿರ್ದೇಶಕರು
ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್
ಮೈಸೂರು
Benefits of Robotic Natural Knee Replacement (NKR) at Avant BKG Hospital:
- No extra bone loss; only damaged parts are resurfaced
- Small incision
- No soft tissue damages
- No ligament injury
- Long-lasting Oxidised Zirconium implant
- Minimal blood loss
- Reduced pain
- Same-day walking and stair climbing
- Early discharge from the hospital
- No CT/MRI Radiations
- Faster recovery